ಅವಲೋಕನ

ಮಾನವ ಪರಿಸರವು ನಮ್ಮ ಅಸ್ತಿತ್ವದ ಉದ್ದೇಶವಾಗಿದೆ. ಈ ಮಹತ್ತರವಾದ ಕಾರಣಕ್ಕಾಗಿನ ನಮ್ಮ ಸಾಧಾರಣ ಕೊಡುಗೆಯು ನಮ್ಮ ಭೂಮಿಯು ಅದರ ಹಸಿರು ಆವರಣವನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಸಲುವಾಗಿ ನೈಸರ್ಗಿಕ ಕಾಡುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಸಲಹೆ ನೀಡಲು ಹಾಗೂ ಸಂಶೋಧನೆ ಮತ್ತು ತರಬೇತಿ ಕೈಗೊಳ್ಳುವ ಕ್ಷೇತ್ರದಲ್ಲಿ ಅಡಗಿದೆ. IPIRTI ಭಾರತ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿನ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಇದು ಭಾರತ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದೊಂದಿಗೆ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಖಾತೆಯ ಉಸ್ತುವಾರಿ ಮಂತ್ರಿಯನ್ನು ತನ್ನ ಮುಖ್ಯಸ್ಥ (ಪ್ರೆಸಿಡೆಂಟ್)ರನ್ನಾಗಿ ಮತ್ತು ಸಚಿವಾಲಯದ ಕಾರ್ಯದರ್ಶಿಗಳನ್ನು ತನ್ನ ಅಧ್ಯಕ್ಷ(ಚೇರ್ ಮನ್)ರನ್ನಾಗಿ ಹೊಂದಿದೆ. 1962 ರಲ್ಲಿ ಪ್ಲೈವುಡ್ ಉದ್ಯಮ ಮತ್ತು CSIRನ ಸಹಕಾರಿ ಸಂಶೋಧನಾ ಸಂಘವಾಗಿ ಪ್ರಾರಂಭವಾದ ಸಂಸ್ಥೆಯು, ಮರ ಆಧಾರಿತ ಉದ್ಯಮಕ್ಕೆ ಹೊಸ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮೀಸಲಾಗಿರುವ ಕ್ರಿಯಾತ್ಮಕ ಮತ್ತು ಸೃಜನಶೀಲ ಸಂಸ್ಥೆಯಾಗಿ ವಿಕಸನಗೊಂಡಿದೆ. ಮರವನ್ನು ಆಧರಿಸಿರುವ ಪ್ಯಾನೆಲ್‌ಗಳ ನಿರ್ದಿಷ್ಟ ಉಲ್ಲೇಖದೊಂದಿಗೆ ಮರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿನ ದತ್ತಾಂಶ ಮತ್ತು ಮಾಹಿತಿಯ ಸಮಗ್ರ ಮೂಲದೊಂದಿಗೆ, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪರಿಣತಿ ಕೇಂದ್ರವಾಗಿದೆ. ಸರಿಸುಮಾರು ನಾಲ್ಕು ದಶಕಗಳ ಅನುಭವ ಮತ್ತು ಪರಿಣತಿಯೊಂದಿಗೆ, ಸಂಸ್ಥೆಯು ತಮ್ಮ ಹೃದಯದಲ್ಲಿ ಪರಿಸರದ ಹಿತಾಸಕ್ತಿಗಳೊಂದಿಗೆ ಮರದ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಉದ್ಯಮಗಳ ಜಾಗತಿಕ ಭ್ರಾತೃತ್ವವನ್ನು ಒಳಗೊಳ್ಳುವ ಹಿತದೃಷ್ಟಿಯಿಂದ ಧನಸಹಾಯದ ಯೋಜನೆಗಳಲ್ಲಿ ಕೆಲಸ ಮಾಡಲು ಮತ್ತು ಅದರ ಸದಸ್ಯರ ಪಟ್ಟಿಯನ್ನು ವಿಸ್ತರಿಸಲು ಕಾತರದಿಂದ ನಿರೀಕ್ಷಿಸುತ್ತಿದೆ.